ತಾಯಿಯು ಮಗುವನ್ನು ತನ್ನ ಗರ್ಭದಲ್ಲಿ ಭದ್ರವಾಗಿ ರಕ್ಷಿಸಿ ಜನ್ಮ ನೀಡುತ್ತಾಳೆ, ಹಾಲಿನ ಅಮೃತವನ್ನೆ ಉಣಿಸುತ್ತಾಳೆ, ಮಾರ್ಗದರ್ಶಕಳಾಗಿ, ಗುರುಗಳಾಗಿ, ಗೆಳೆಯಳಾಗಿ ಮಗುವಿನ ಏಳಿಗೆಗೆ ತನ್ನ ಸರ್ವಸ್ವವನ್ನೆ ಅರ್ಪಿಸುತ್ತಾಳೆ ಮತ್ತು ತಂದೆ ತಾಯಿ ಇಬ್ಬರು ಮಗುವಿನ ಸಂತೋಷದಲ್ಲಿ ತಮ್ಮ ಸಂತಸವನ್ನು ಕಾಣುತ್ತಾರೆ.
ಇವರಿಬ್ಬರ ಪ್ರೀತಿ, ವಾತ್ಸಲ್ಯ ಮತ್ತು ಮಮತೆ ಭೂಮಿ-ಬಾನಿಗಿಂತಲು ದೊಡ್ಡದು ಎಂದು ಅರ್ಥೈಸಿಕೊಟ್ಟ ಇತಿಹಾಸದ ಶ್ರವಣ ಕುಮಾರನ [1] ಧೈಯ, ಆದರ್ಶಗಳನ್ನು ಶ್ರೀಮತಿ ಚನ್ನಾಜಮ್ಮನವರ ಮಕ್ಕಳು ಪಾಲಿಸುತ್ತಾ ಬಂದಿದ್ದಾರೆ. ಮಕ್ಕಳು ತಂದೆ ತಾಯಿಯರ ಬಗ್ಗೆ ಸಹೃದಯಿಗಳಾಗಿ ಬೆಳೆಯಬೇಕೆಂಬ ಅಂಶವನ್ನು ಯುವ ಜನರಿಗೆ ಮುಟ್ಟಿಸಿ ಅಸಹಾಯಕ ಜನಸಮುದಾಯಕ್ಕೆ ಜಾತಿ ಮತ ಭೇದವಿಲ್ಲದೆ ಆರ್ಥಿಕ, ಶೈಕ್ಷಣಿಕ, ಧಾರ್ಮಿಕ, ವೈದ್ಯಕೀಯ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಂಡು,ಜನಸಾಮಾನ್ಯರ ಕಷ್ಟ-ಸುಖಗಳಿಗೆ ಸ್ಪಂದಿಸುವುದು “ಪಾರ್ವತಮ್ಮ ಚನ್ನಾಜಮ್ಮ ಸ್ಮಾರಕ ದತ್ತಿ ಪ್ರತಿಷ್ಠಾನದ” ನಿಲುವಾಗಿದೆ.
Footnotes (↵ returns to text)
Shravan Kumar belonged to the time when Dasaratha ruled Ayodhya. Shravan Kumar had parents who were blind and poor but in spite of all troubles Shravan Kumar was brought up well by his parents. Shravan Kumar is known to have a lot of dedication for his parents and at the same time he was whole heartedly dedicated to God. He endeavoured a lot to make his parents happy and comfortable and also spent long hours meditating upon the lord.↵
Online Donations
You can now make online donations to PCMC Trust. Use the below link to make your donations.
All donations made to PCMC Trust are deductible under 80G of Income Tax.