Parvatamma Channajamma Memorial Charitable Trust

pcmc logo          ತಾಯಿಯು ಮಗುವನ್ನು ತನ್ನ ಗರ್ಭದಲ್ಲಿ ಭದ್ರವಾಗಿ ರಕ್ಷಿಸಿ ಜನ್ಮ ನೀಡುತ್ತಾಳೆ, ಹಾಲಿನ ಅಮೃತವನ್ನೆ ಉಣಿಸುತ್ತಾಳೆ, ಮಾರ್ಗದರ್ಶಕಳಾಗಿ, ಗುರುಗಳಾಗಿ, ಗೆಳೆಯಳಾಗಿ ಮಗುವಿನ ಏಳಿಗೆಗೆ ತನ್ನ ಸರ್ವಸ್ವವನ್ನೆ ಅರ್ಪಿಸುತ್ತಾಳೆ ಮತ್ತು ತಂದೆ ತಾಯಿ ಇಬ್ಬರು ಮಗುವಿನ ಸಂತೋಷದಲ್ಲಿ ತಮ್ಮ ಸಂತಸವನ್ನು ಕಾಣುತ್ತಾರೆ.

           ಇವರಿಬ್ಬರ ಪ್ರೀತಿ, ವಾತ್ಸಲ್ಯ ಮತ್ತು ಮಮತೆ ಭೂಮಿ-ಬಾನಿಗಿಂತಲು ದೊಡ್ಡದು ಎಂದು ಅರ್ಥೈಸಿಕೊಟ್ಟ ಇತಿಹಾಸದ ಶ್ರವಣ ಕುಮಾರನ [1] ಧೈಯ, ಆದರ್ಶಗಳನ್ನು ಶ್ರೀಮತಿ ಚನ್ನಾಜಮ್ಮನವರ ಮಕ್ಕಳು ಪಾಲಿಸುತ್ತಾ ಬಂದಿದ್ದಾರೆ. ಮಕ್ಕಳು ತಂದೆ ತಾಯಿಯರ ಬಗ್ಗೆ ಸಹೃದಯಿಗಳಾಗಿ ಬೆಳೆಯಬೇಕೆಂಬ ಅಂಶವನ್ನು ಯುವ ಜನರಿಗೆ ಮುಟ್ಟಿಸಿ ಅಸಹಾಯಕ ಜನಸಮುದಾಯಕ್ಕೆ ಜಾತಿ ಮತ ಭೇದವಿಲ್ಲದೆ ಆರ್ಥಿಕ, ಶೈಕ್ಷಣಿಕ, ಧಾರ್ಮಿಕ, ವೈದ್ಯಕೀಯ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಂಡು,ಜನಸಾಮಾನ್ಯರ ಕಷ್ಟ-ಸುಖಗಳಿಗೆ ಸ್ಪಂದಿಸುವುದು “ಪಾರ್ವತಮ್ಮ ಚನ್ನಾಜಮ್ಮ ಸ್ಮಾರಕ ದತ್ತಿ ಪ್ರತಿಷ್ಠಾನದ” ನಿಲುವಾಗಿದೆ.

PARVATHAMMA CHANNAJAMMA MEMORIAL CHARITABLE TRUST